ಪ್ರಥ್ವಿ ವಲ್ಲಭ ( : Pṛthvīvallabha ), ಅಥವಾ ವಲ್ಲಭ ರಾಜ ಎನ್ನುವುದು ಇಂದಿನ ಕಾಲದ ಭಾರತದಲ್ಲಿ ಆಳಿದ ವಾತಾಪಿಯ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಅವರ ಉತ್ತರಾಧಿಕಾರಿಗಳು ಅಳವಡಿಸಿಕೊಂಡಿದ್ದ ಬಿರುದು. == ವಾತಾಪಿಯ ಚಾಲುಕ್ಯರು == ವಾತಾಪಿಯ ಚಾಲುಕ್ಯ ರಾಜವಂಶದ ಸಾರ್ವಭೌಮ ಆಡಳಿತಗಾರೆಲ್ಲರೂ ಶ್ರೀ-ಪ್ರಥ್ವಿ-ವಲ್ಲಭ ಎಂಬ ಬಿರುದನ್ನು ಹೊಂದಿದ್ದರು. ಶ್ರೀ-ಪ್ರಥ್ವಿ-ವಲ್ಲಭ ಎಂದರೆ ‘ಅದೃಷ್ಟ ಮತ್ತು ಭೂಮಿ ದೇವತೆಯ ಪತಿ’ (ಅಂದರೆ ವಿಷ್ಣು ). ಮಹಾಕೂಟ ಶಾಸನಗಳ ಪ್ರಕಾರ ಮಂಗಳೇಶನು ನಿಖರವಾಗಿ ಪ್ರಥ್ವಿ-ವಲ್ಲಭ ಬಿರುದನ್ನು ಹೊಂದಿದ್ದನು. ಚಾಲುಕ್ಯ ರಾಜ್ಯಪಾಲ ಜಯಾಶ್ರಯ ಮಂಗಳರಸನ 7 ಎಪ್ರಿಲ್ 691ರ ( ಶಕ ಯುಗದ ವರ್ಷ 613) ಮಾನೊರ್ ಶಾಸನವು ಆತನ ಬಿರುದುಗಳಲ್ಲಿ ಪ್ರಥ್ವಿ-ವಲ್ಲಭ ಒಂದೆಂದು ಉಲ್ಲೇಖಿಸಿದೆ. ಅವನ ಮಗ ಅವನಿಜನಾಶ್ರಯ ಪುಲಕೇಶಿನ್ ಕೂಡ ಅದೇ ಬಿರುದನ್ನು ಹೊಂದಿದ್ದನು. == ರಾಷ್ಟ್ರಕೂಟರು == ರಾಷ್ಟ್ರಕೂಟರಲ್ಲಿ, ದಖ್ಖನ್ನಿನ 8ನೇ ಶತಮಾನದ ರಾಜ ಮತ್ತು ರಾಷ್ಟ್ರಕೂಟ ರಾಜವಂಶದ ಸ್ಥಾಪಕನಾಗಿದ್ದ ದಂತಿದುರ್ಗನು ಮೊದಲನೆಯದಾಗಿ ಈ ಬಿರುದನ್ನು ಹೊಂದಿದ್ದನು. ಪೃಥ್ವಿ ಎಂದರೆ ‘ಭೂಮಿ’ ಮತ್ತು ವಲ್ಲಭ ಎಂದರೆ ‘ಮನೆಯ ಮುಖ್ಯಸ್ಥ’ ಅಥವಾ ‘ಪ್ರೇಮಿ’. ಆದ್ದರಿಂದ ಈ ಬಿರುದನ್ನು ಭೂಮಿಯ ಒಡೆಯ ಎಂಬುದಾಗಿ ತಿಳಿದುಕೊಳ್ಳಬಹುದು. ಪ್ರಥ್ವಿ ಎಂಬುದೂ ವಿಷ್ಣುವಿನ ನಿಯಂತ್ರಣದಲ್ಲಿದ್ದ ಭೂಮಿ ದೇವತೆಯ ಹೆಸರಾಗಿರುವುದರಿಂದ, ಈ ಬಿರುದು ದಂತಿದುರ್ಗ ಮತ್ತು ಆತನ ಉತ್ತರಾಧಿಕಾರಿಗಳನ್ನು ಹಿಂದೂ ದೇವರಾದ ವಿಷ್ಣುವಿಗೆ ಹೋಲಿಸುವಂತಿತ್ತು. ಈ ಬಿರುದನ್ನು ವಲ್ಲಭ ಎಂಬುದಾಗಿ ಸಂಕ್ಷಿಪ್ತಗೊಳಿಸಲಾಯಿತು ಮತ್ತು ಮುಸ್ಲಿಮ್ ವೀಕ್ಷಕರು ಬಲ್ಲಾರ ಎಂಬುದಾಗಿ ಬರೆದಿದ್ದಾರೆ. == ನಂತರದ ರಾಜವಂಶಗಳು == ಈ ಬಿರುದನ್ನು ರಾಷ್ಟ್ರಕೂಟರ ನಂತರ ದಖ್ಖನ್ನನ್ನು ಆಳಿದ ಕಲ್ಯಾಣಿಯ ಚಾಲುಕ್ಯರೂ ಪಡೆದುಕೊಂಡಿದ್ದರು. ಮಾಳ್ವಾದಲ್ಲಿ ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದ ಪರಮರ ರಾಜವಂಶದ ಮುಂಜ ಯಾನೆ ವಾಕ್ಪತಿಯವರೂ ಈ ಬಿರುದನ್ನು ಬಳಸಿಕೊಂಡಿದ್ದರು. == ಉಲ್ಲೇಖಗಳು ==